ಕೃಷಿ ವೈಭವ - 2014
ದಿನಾಕ 22.09.2014 ರಂದು , ಎಚ್.ಎಸ್ . ಎಸ್ . ಮಂಗಲ್ಪಾಡಿ ಶಾಲೆಯ ECO-club ನ ನೇತೃತ್ವದಲ್ಲಿ ಶಾಲಾ ವಠಾರದಲ್ಲಿ ಕೈತೋಟವನ್ನು ಆರಂಭಿಸುವ ಯೋಜನೆಗೆ ಚಾಲನೆಯನ್ನು ನೀಡಲಾಯಿತು. ಮಂಗಲ್ಪಾಡಿ ಪಂಚಾಯತಿನ ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.
ಶಾಲಾ ಸಭಾಂಗಣದಲ್ಲಿ ಜರಗಿದ ಪ್ರಥಮ ಮಾಹಿತಿ ಶಿಬಿರದಲ್ಲಿ ಕ್ಲಬ್ಬಿನ ಸದಸ್ಯರಾದ ವಿದ್ಯಾರ್ಥಿ - ವಿದ್ಯಾರ್ಥಿನಿಯರೆಲ್ಲರೂ ಅತ್ಯುತ್ಸಾಹದಿಂದ ಪಾಲ್ಗೊಂಡರು. ಕ್ಲಬ್ಬಿನ ನೇತೃತ್ವವನ್ನು ವಹಿಸಿರುವ ಶಾಲಾ ಅಧ್ಯಾಪಕರಾದ ಶ್ರೀಯುತ ಉಮೇಶ್ ನಾಯ್ಕ್ . ಕೆ . ರವರು ಸಭೆಯಲ್ಲಿ ಪಾಲ್ಗೊಂಡ ಗಣ್ಯ ವ್ಯಕ್ತಿಗಳನ್ನು ಹಾಗೂ ವಿದ್ಯಾರ್ಥಿ ಸಮೂಹವನ್ನು ಸ್ವಾಗತಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಶ್ರೀಯುತ ಸಂತೋಷ್ ಕುಮಾರ್ (Agricultural Asst,Mangalpady Agricultural Dept ) ರವರು ಕೃಷಿಯ ಮಹತ್ವದ ಕುರಿತು ವಿವರಿಸಿದರು. ಶಾಲಾ ಪರಿಸರದಲ್ಲಿ ಹೇಗೆ ತರಕಾರೀ ತೋಟವನ್ನು ಬೆಳೆಸಬಹುದು ಎಂಬುದರ ಕುರಿತು ಕ್ಲಬ್ಬಿನ ಸದಸ್ಯರಿಗೆ ಮಾರ್ಗದರ್ಶನವನ್ನು ನೀಡಿದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಮುಖ್ಯೋಪಾದ್ಯಯಿನಿಯರಾದ ಶ್ರೀಮತಿ ಲತಾ.ಕೆ ರವರು ಕ್ಲಬ್ಬಿನ ಕೃಷಿ ಯೋಜನೆಗೆ ಶುಭ ಹಾರೈಸಿದರು. ..click here for more details..
0 comments:
Post a Comment