SCHOOL KALOTHSAVAM 2014
ಕಲೋತ್ಸವ 2014
ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯ ಕಲೋತ್ಸವವು ದಿನಾಂಕ 23 ಮತ್ತು 24.10.14 ರಂದು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಸಮಾರಂಭದ ಉಧ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಯಾದ ಶ್ರೀಮತಿ ಆಯಿಶಾತ್ ತಾಹಿರ ನೆರವೇರಿಸಿದರು.. ಕಲೋತ್ಸವ ಕನ್ವೀನರ್ ಶ್ರೀ ಸುನಿಲ್ ಕುಮಾರ್ ಟಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಆಪೋಲೋ , ಹಿರಿಯ ಶಿಕ್ಷಕಿ ಶ್ರೀಮತಿ ಜ್ಯೋತಿ ಎಚ್ ಹಾಗೂ ಇತರ ಗಣ್ಯರು ಕಾರ್ಯಕ್ರಮಕ್ಕೆ ಶುಭ ಕೋರಿದರು.. ಹಿರಿಯ ಅಧ್ಯಾಪಿಕೆ ಶೀಲಾ ಕೆ ಎಸ್ ಧನ್ಯವಾದವನ್ನಿತ್ತರು.
ವಿಜೇತ ತಂಡಗಳಿಗೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕ, ಬಹುಮಾನಗಳನ್ನು ವಿತರಿಸಿದರು. ಹೈಸ್ಕೂಲ್ ಜನರಲ್ ವಿಭಾಗದಲ್ಲಿ ರಿಜೇಶ್ 10 ಎ ನೇತೃತ್ವದ 'ಬ್ಲ್ಯೂ ಹೌಸ್ ' ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. click here for more...
0 comments:
Post a Comment