'STEPS' MOTIVATION TRAINING CAMP
'ಸ್ಟೆಪ್ಸ್ ' ಮೋಟಿವೇಶನ್ ತರಗತಿ
ಮಂಜೇಶ್ವರ ಉಪಜಿಲ್ಲಾ ಮಟ್ಟದ ' ಸ್ಟೆಪ್ಸ್ ' ಮೋಟಿವೇಶನ್ ತರಗತಿಗಳು ದಿನಾಂಕ 07.10.2014ರಂದು ವಿವಿಧ ಕೇಂದ್ರಗಳಲ್ಲಿ ಜರಗಿತು. ಕನ್ನಡ ಮಾಧ್ಯಮದ ಶಿಕ್ಷಕ / ಶಿಕ್ಷಕಿಯರಿಗಾಗಿ S . A . T ಮಂಜೇಶ್ವರದಲ್ಲಿ ನಡೆದ ತರಬೇತಿಯಲ್ಲಿ ನಮ್ಮ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀಯುತ ಲಕ್ಷ್ಮೀಕಾಂತ್ .ಕೆ ಹಾಗೂ ಶ್ರೀ ಪ್ರವೀಣ್ ಕುಮಾರ್ ರವರು ಪಾಲ್ಗೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀ ಸಂಜೀವ ಮರಿಕೆ ಜಿಎಚ್‌ಎಸ್‌ಎಸ್ ಪೈವಳಿಕೆ, ಶ್ರೀ ನಾರಾಯಣ,ಎನ್ ಎಚ್ ಎಸ್ ಪೆರಡಾಲ ಹಾಗೂ ಶ್ರೀಮತಿ ಜಲಜಾಕ್ಷಿ , DIET ಮಾಯಿಪಾಡಿಯವರು ತರಗತಿಯನ್ನು ನಡೆಸಿ ಕೊಟ್ಟರು.
ಮಲಯಾಳ ಮಾಧ್ಯಮದ ಶಿಕ್ಷಕ / ಶಿಕ್ಷಕಿಯರಿಗಾಗಿ ಜಿ ಎಸ್ ಬಿ ಎಸ್ ಕುಂಬಳೆಯಲ್ಲಿ ನಡೆದ ತರಬೇತಿಯಲ್ಲಿ ನಮ್ಮ ಶಾಲಾ ಅಧ್ಯಾಪಕರಾದ ಶ್ರೀಯುತ ಶ್ರೀಧರನ್ ಟ.ವಿ ಹಾಗೂ ಶ್ರೀಮತಿ ಶೌಜತ್ ರವರು ಪಾಲ್ಗೊಂಡರು.
0 comments:
Post a Comment