SELECTED FOR THE STATE CRICKET TEAM
ಕೇರಳ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆ
.
ನಮ್ಮ ಶಾಲೆಯ ಹತ್ತನೇ ತರಗತಿಯ ಮುಹಾಜ್ ಮಹಮ್ಮದ್ ಶೈಕ್ ಕೇರಳ ರಾಜ್ಯ ಅಂಡರ್ 17 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಕಳೆದ ಬಾರಿಯೂ ಆಯ್ಕೆಯಾಗಿ ಅತ್ಯುತ್ತಮ ಆಟಗಾರನಾಗಿ ಮಿಂಚಿರುವ ಮುಹಾಜ್ ಓರ್ವ ಪ್ರತಿಭಾವಂತ ವಿದ್ಯಾರ್ಥಿಯಾಗಿರುವನು. ಈಗಾಗಲೇ ಹಲವಾರು ಕ್ರೀಡಾಮೇಳಗಳಲ್ಲಿ ಭಾಗವಹಿಸಿ. ಜನಮೆಚ್ಚುಗೆಯನ್ನು ಪಡೆದಿರುವನು. ಚಂಢೀಘಢದಲ್ಲಿ ನಡೆಯಲಿರುವ ಅಂತರಾಜ್ಯ ಕ್ರಿಕೆಟ್ ಸ್ಪರ್ಧೆಯಲ್ಲಿ ಮುಹಾಜ್ ಅತ್ಯುತ್ತಮ ಸಾಧನೆಯನ್ನು ಮಾಡಲೆಂದು ಶಾಲಾ ಮುಖ್ಯೋಪಾಧ್ಯಾಯಿನಿ. ಶ್ರೀಮತಿ ಲತಾ ಕೆಯವರು ಶುಭ ಹಾರೈಸಿದರು.
0 comments:
Post a Comment