ಮಂಗಲ್ಪಾಡಿ ಶಾಲೆಯ ನೂತನ ಕಟ್ಟಡಕ್ಕೆ
ಶಿಕ್ಷಣ ಮಂತ್ರಿಗಳಿಂದ ಶಿಲಾನ್ಯಾಸ
FOUNDATION STONE LAYING PROGRAMME BY THE HONOURABLE MINISTER FOR EDUCATION
SRI.ABDU RABB
മംഗല്പാടി ഗവ. ഹയര്
സെക്കണ്ടറി സ്കൂളിന് മംഞ്ചേശ്വരം എംഎല് എ ഫണ്ടില് നിര്മ്മിക്കുന്ന ഒന്നര കോടി
രുപയുടെ കെട്ടിടത്തിന് കേരള വിദ്യഭ്യാസ മന്ത്രി ശ്രീ പികെ അബ്ദു റബ്ബ്
തറക്കല്ലിട്ടു. ചടങ്ങില് അദ്ദേഹം സ്കൂളിന്റെയും നാടിന്റെയും അഭിമാനമായി മാറിയ
സംസ്ഥാന സ്തൂള് കലോത്സവ വിജേതാക്കള്ക്ക് കാഷ് അവാര്ഡും ഉപഹാരവും നല്ക്കി
അനുമോദിച്ചു. മംഞ്ചേശ്വരം എംഎല്എ പിബി അബ്ദുള് രസാക് അധ്യക്ഷം വഹിച്ചു. ജില്ലാ
പഞ്ചായത്ത് മെമ്പര് എകെഎം അശറഫ്, മംഗല്പാടി ഗ്രാമ പഞ്ചായത്ത് പ്രസിഡണ്ട്
ആയിഷത്ത് താഹിറ, ജില്ലാ വിദ്യഭ്യാസ ഡയറക്ടര് സി രാഘവന്
മുതലായവര് ആശംസകള് അര്പ്പിച്ചു. പ്രിന്സിപ്പാള് ജിസാ ജോസ് സ്വാഗതവും ഹെഡ്
മിസ്ട്രസ് ലത കെ നന്തിയും പറഞ്ഞു.
ಮಂಗಲ್ಪಾಡಿ
ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಗಾಗಿ ಮಂಜೇಶ್ವರ ಶಾಸಕರ ನಿಧಿಯಿಂದ ನಿರ್ಮಿಸಲಾಗುವ ಒಂದುವರೆ
ಕೋಟಿ ರೂ ಮೌಲ್ಯದ ನೂತನ ಕಟ್ಟಡ ನಿರ್ಮಾಣಕ್ಕೆ ಕೇರಳ ಸರಕಾರದ ಶಿಕ್ಷಣ ಮಂತ್ರಿಗಳಾದ ಶ್ರೀ ಪಿಕೆ
ಅಬ್ದು ರಬ್ ಅವರು ಶಿಲಾನ್ಯಾಸಗೈದರು. ಸಭೆಯಲ್ಲಿ ಮಂಜೇಶ್ವರ ಶಾಸಕರಾದ ಶ್ರೀ ಪಿಬಿ ಅಬ್ದುಲ್
ರಝಾಕ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಮಟ್ಟದ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ತಂಡದ
ಸದಸ್ಯರಾದ ಅಕ್ಷಯ್ ಶೆಟ್ಟಿ, ಅಶ್ವಿತ, ಶ್ರಾವ್ಯ ಡಿ ಉಚಿಲ್, ಮಹಿಮ, ಸಾಕ್ಷಾತ್ ಶೆಟ್ಟಿ, ವೈಭವ್ ಶೆಟ್ಟಿ, ಶುಭಶ್ರೀ ಹಾಗೂ ಯಕ್ಷಗಾನ ಗುರು ಶ್ರೀ ಶೇಖರ ಶೆಟ್ಟಿ ಅವರಿಗೆ
ನಗದು ಬಹುಮಾನ ಮತ್ತು
ಸ್ಮರಣಿಕೆಯನ್ನು ಶಿಕ್ಷಣ ಮಂತ್ರಿಗಳು ನೀಡಿದರು. ಸ್ಕೌಟ್ ಗೈಡ್ ವಿದ್ಯಾರ್ಥಿಗಳು ನೀಡಿದ ಗಾರ್ಡ
ಆಫ್ ಆನರ್ ಸ್ವೀಕರಿಸಿದ ಶಿಕ್ಷಣ ಮಂತ್ರಿಗಳು ಶಾಲಾ ಮಕ್ಕಳ ಸಾಧನೆಯನ್ನು ಶ್ಲಾಘಿಸಿದರು. ಜಿಲ್ಲಾ
ಪಂಚಾಯತು ಸದಸ್ಯ ಎಕೆಎಂ ಅಶ್ರಫ್, ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಆಯಿಶತ್ ತಾಹಿರ, ಜಿಲ್ಲಾ ಶಿಕ್ಷಣ
ಉಪನಿರ್ದೇಶಕರಾದ ಸಿ ರಾಘವನ್ ಮೊದಲಾದವರು ಶುಭಹಾರೈಸಿದರು. ಶಾಲಾ ಪ್ರಾಂಶುಪಾಲೆ ಜಿಸಾ ಜೋಸ್
ಸ್ವಾಗತಿಸಿ ಮುಖ್ಯೋಪಾಧ್ಯಾಯಿನಿ ಲತ ಕೆ ವಂದಿಸಿದರು.
0 comments:
Post a Comment