OUR " SCHOOL VEGETABLE GARDEN "
Wednesday, December 31, 2014
Saturday, December 27, 2014
Friday, December 26, 2014
Tuesday, December 16, 2014
DISTRIBUTION OF UNIFORMS
ಸಮವಸ್ತ್ರ ವಿತರಣೆ
2014-15ನೇ ಶೈಕ್ಷಣಿಕ ವರ್ಷದ ಸಮವಸ್ತ್ರ ವಿತರಣೆಯನ್ನು ದಿನಾಂಕ 16.12.2014ರಂದು ಶಾಲಾ ರಕ್ಷಕ ಶಿಕ್ಷಕ ವೃಂದದ ಅಧ್ಯಕ್ಷರಾದ ಶ್ರೀ ಉಮ್ಮರ್ ಆಪೋಲೋ ಉಧ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ . ಕೆ ಹಾಗೂ ಹಿರಿಯ ಅಧ್ಯಾಪಕರಾದ ಶ್ರೀ ವಿಜಯ . ಕೆ ಉಪಸ್ಥಿತರಿದ್ದರು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
Saturday, December 13, 2014
SELECTED FOR THE STATE LEVEL VIDYARANGAM COMPETITIONS
ರಾಜ್ಯ ಮಟ್ಟದ ವಿದ್ಯಾರಂಗ ಸ್ಪರ್ದೆಗೆ ಆಯ್ಕೆಯಾದ ಶ್ರೇಯಾ
.........Congratulations.......
ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವ ಸ್ಪರ್ದೆಯಲ್ಲಿ ಕನ್ನಡ ಕಾವ್ಯ ಮಂಜರಿ ವಿಭಾಗದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯಾದ ಶ್ರೇಯಾ 10 ಬಿ , ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವಳು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತ ಕೆ ಹಾಗೂ ಕನ್ನಡ ವಿಭಾಗದ ಅದ್ಯಾಪಿಕೆಯಾದ ಶ್ರೀಮತಿ ಸುನೀತ , ಎ . ವಿಜೇತಳನ್ನು ಅಭಿನಂದಿಸಿದರು.
Friday, December 5, 2014
Thursday, December 4, 2014
Wednesday, December 3, 2014
!!! OVERALL CHAMPIONS !!!!
Manjeshwara Sub District School Youth Festival 2014-15
The four-day Manjeshwara Sub district School Youth festival at S.S.B.A.U.P.S.Aila and A.J.I.A.U.P.S Uppala concluded on 3rd Dec 2014. The fourth and the final day of the festival marked with colourful dancing events. We are proud to say that our school once again emerged as
!!!!!!! CHAMPIONS !!!!!!!
Congratulation to all the participants and the teachers who have led us to reach this milestone.....
Saturday, November 22, 2014
INAUGURATION OF 'SEED CLUB'
And Distribution of Seeds
ಸೀಡ್ ಕ್ಲಬ್ ಉಧ್ಘಾಟನೆ ಹಾಗೂ ಬೀಜ ವಿತರಣೆ
ಸೀಡ್ ಕ್ಲಬ್ ಉಧ್ಘಾಟನೆ ಹಾಗೂ ಬೀಜ ವಿತರಣೆ
ಪರಿಸರ ಸ್ನೇಹಿ ಕೃಷಿ, ಜಲ ಸಂರಕ್ಷಣೆ , ಶುದ್ಧ ಗಾಳಿ ಸಂರಕ್ಷಿಸುವ ಭಾಗವಾಗಿ ಮಾತೃಭೂಮಿ ಹಾಗೂ ಫೆಡರಲ್ ಬ್ಯಾಂಕ್ ಸಹಯೋಗದೊಂದಿಗೆ ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯಲ್ಲಿ ದಿನಾಂಕ 21.11.2014ರಂದು ' SEED' ಕ್ಲಬ್ಬನ್ನು ಉಧ್ಘಾಟಿಸಲಾಯಿತು . ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಲಿತಮ್ಮ ಎಂ ವಹಿಸಿದರು. ಶಾಲಾ SEED ಕೋ - ಓರ್ಡಿನೇಟರ್ ಶ್ರೀ ಉಮೇಶ್ ನಾಯ್ಕ್ ಕೆ ಸ್ವಾಗತಿಸಿದರು.ಕೃಷಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಿ.ಅಬೂಬಕರ್ ರವರು ತರಕಾರಿ ಬೀಜವನ್ನು ವಿತರಿಸಿ SEED ಕ್ಲಬ್ಬನ್ನು ಉಧ್ಘಾಟಿಸಿದರು.
ಸಭೆಯಲ್ಲಿ ಉಪಸ್ಥಿತರಾದ ಮಾತೃಭೂಮಿ ಯೂನಿಟ್ ಮ್ಯಾನೇಜರ್ ಶ್ರೀ ಜೋಬಿ .ಪಿ. ಪೌಲೋಸ್ , ಶಾಲಾ PTA ಅಧ್ಯಕ್ಷರಾದ ಶ್ರೀ ಆಪೋಲೋ ಉಮ್ಮರ್ , ಕೃಷಿ ಇಲಾಖೆಯ ಶ್ರೀ ಸಂತೋಷ್ ಕುಮಾರ್ (Aggri. Asst ), ಶ್ರೀ ರಾಜೇಶ್ ಕುಮಾರ್ ( ಮಾತೃಭೂಮಿ ಕರಸ್ಪೋಂಡೆಂಟ್,ಕಾಸರಗೋಡು) ಹಾಗೂ ಶ್ರೀ ಬೀಜೇಶ್ ಬಾಲಕೃಷ್ಣನ್ (Exicutive ,SEED) ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಶ್ರೀ ಪ್ರಕಾಶನ್ ಇ . ಆರ್ ಧನ್ಯವಾದವಿತ್ತರು. ಕಾರ್ಯಕ್ರಮದ ಬಳಿಕ. ಎಲ್ಲರೂ ಶಾಲಾ ಜೈವಿಕ ಕೃಷಿ ಕೈತೋಟವನ್ನು ಸಂದರ್ಶಿಸಿದರು. CLICK HERE for more....
Saturday, November 1, 2014
ANNUAL SPORTS MEET 2014-15
ಶಾಲಾ
ಕ್ರೀಡೋತ್ಸವ 2014-15
2014 – 15ನೇ ಸಾಲಿನ ಶಾಲಾ ಆಟೋಟ ಸ್ಪರ್ಧೆಗಳು ದಿನಾಂಕ 29 ಮತ್ತು 30.10.2014ರಂದು ಜರಗಿತು.
ಕ್ರೀಡೋತ್ಸವವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಆಪೋಲೋರವರು
ಉಧ್ಘಾಟಿಸಿದರು. ಶ್ರೀ ವಸಂತ ಕುಮಾರ್ ಸಿ.ಕೆ,(ಸ್ಟಾಫ್ ಸೆಕ್ರೆಟರಿ) ಸ್ವಾಗತಿಸಿದರು.
ಸಮಾರಂಭದ ಅಧ್ಯಕ್ಷರಾಗಿ ಭಾಗವಹಿಸಿದ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಲತ ಕೆ. ವಿದ್ಯಾರ್ಥಿ
ಜೀವನದಲ್ಲಿ ಕ್ರೀಡೆಯ ಮಹತ್ವದ ಕುರಿತು ಮಾತನಾಡಿದರು. ಶ್ರೀ ಬಶೀರ್ ಅಹಮ್ಮದ್,P.E.T ರವರು ಪ್ರತಿಜ್ನೆಯನ್ನು ಭೋಧಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಗುರುಮೂರ್ತಿ ಎಂ.ರವರು
ಧನ್ಯವಾದವನ್ನು ಸಮರ್ಪಿಸಿದರು. ಶ್ರೀ ಪ್ರದೀಪ್ ಕುಮಾರ್ . ಯು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Monday, October 27, 2014
MANJESHWAR SUB DISTRICT VIDYARANGA 2014-15
ಮಂಜೇಶ್ವರ ಉಪಜಿಲ್ಲೆ ವಿದ್ಯಾರಂಗ ಸಾಹಿತ್ಯೋತ್ಸವ 2014 - 15
വിദ്യാരംഗ സാഹിത്യോത്സവം
ಪ್ರಧಾನ ಉಪನ್ಯಾಸಕರಾಗಿ ಆಗಮಿಸಿದ ಶ್ರೀ. ಕೆ . ಕಮಲಾಕ್ಷ ,ನಿರ್ದೇಶಕರು ಭಾರತೀಯ ಭಾಷಾ ಅಧ್ಯಯನಾಂಗ, ಕಾಸರಗೋಡು ತಮ್ಮ ವಾಕ್ಚಾತುರ್ಯದಿಂದ ವಿದ್ಯಾರ್ಥಿಗಳ ಮನಗೆದ್ದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಜಿಸಾ ಜೋಸ್ ಶುಭ ಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಸುನಿಲ್ ಕುಮಾರ್ ಟಿ ಧಾನ್ಯಾವಾದವಿತ್ತರು.
ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಿರಿಯ ಅಧ್ಯಾಪಕರೂ ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯೂ ಆದ ಶ್ರೀ ಗುರುಮೂರ್ತಿ ಎಂ ನಡೆಸಿಕೊಟ್ಟರು. ವಿಜೇತರಾದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರಗಳನ್ನು ಹಂಚಲಾಯಿತು.CLICK HERE FOR RESULTS...
വിദ്യാരംഗ സാഹിത്യോത്സവം ഉദ്ഘാടനം ചെയ്തു മംഗല്പാടി ഗവ. ഹയര് സെക്കണ്ടരി സ്കൂളില്
മംഞ്ചേശ്വരം ഉപജില്ലാ വിദ്യാരംഗ കലാ സാഹിത്യ വേദിയുടെ ഈ വര്ഷത്തെ സാഹിത്യോത്സവം
മംഞ്ചേശ്വരം എംഎല്എ അബ്ദുള് രസാക് ഉദ്ഘാടനം ചെയ്ദു. പിടിഎ പ്രസിഡണ്ട് ഉമ്മര്
അപ്പോളോ അധ്യക്ഷം വഹിച്ചു. കാസറഗോഡ് പ്രവര്ത്തിക്കുന്ന ഇന്ത്യന് ഭാഷാ ഗവേഷണ
കേന്ദ്രം തലവന് ഡോ. കമലാക്ഷ മുഖ്യ പ്രഭാഷണം നടത്തി. ഉപജില്ലാ വിദ്യഭ്യാസ ഓഫീസര്
നന്തികേശന്, പ്രിന്സിപ്പാള് ജിസാ ജോസ് ആശംസകള് അര്പ്പിച്ചു.
ഹെഡ് മിസ്ട്രസ് ലത കെ സ്വാഗതവും റിസപ്ശന് കമ്മിറ്റി കണ്വീണര് സുനില്കുമാര്
നന്ദി പ്രകാശനം നടത്തി. ഒമ്പതു വേദികളിലായി കന്നട, മലയാളം
വിഭാഗത്തില് കഥാരചന, കവിതാ രചന, നാടന്
പാട്ട്, കാവ്യമഞ്ചരി, ഉപന്യാസ രചന, ചിത്ര
രചന എന്നീ മത്സരങ്ങള് നടന്നു. മംഞ്ചേശ്വരം ഉപജില്ലയിലെ സാഹിത്യോത്സവത്തിന്റെ
ചരിത്രത്തിലാദ്യമായി എമ്പത്തിനാല് സ്രൂളുകളില്നിന്നായി എണ്ണൂരോളം കുട്ടികള്
സാഹിത്യോത്സവത്തില് പങ്കെടുത്തു.
Friday, October 24, 2014
SCHOOL KALOTHSAVAM 2014
ಕಲೋತ್ಸವ 2014
ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯ ಕಲೋತ್ಸವವು ದಿನಾಂಕ 23 ಮತ್ತು 24.10.14 ರಂದು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಸಮಾರಂಭದ ಉಧ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಯಾದ ಶ್ರೀಮತಿ ಆಯಿಶಾತ್ ತಾಹಿರ ನೆರವೇರಿಸಿದರು.. ಕಲೋತ್ಸವ ಕನ್ವೀನರ್ ಶ್ರೀ ಸುನಿಲ್ ಕುಮಾರ್ ಟಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಆಪೋಲೋ , ಹಿರಿಯ ಶಿಕ್ಷಕಿ ಶ್ರೀಮತಿ ಜ್ಯೋತಿ ಎಚ್ ಹಾಗೂ ಇತರ ಗಣ್ಯರು ಕಾರ್ಯಕ್ರಮಕ್ಕೆ ಶುಭ ಕೋರಿದರು.. ಹಿರಿಯ ಅಧ್ಯಾಪಿಕೆ ಶೀಲಾ ಕೆ ಎಸ್ ಧನ್ಯವಾದವನ್ನಿತ್ತರು.
ವಿಜೇತ ತಂಡಗಳಿಗೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕ, ಬಹುಮಾನಗಳನ್ನು ವಿತರಿಸಿದರು. ಹೈಸ್ಕೂಲ್ ಜನರಲ್ ವಿಭಾಗದಲ್ಲಿ ರಿಜೇಶ್ 10 ಎ ನೇತೃತ್ವದ 'ಬ್ಲ್ಯೂ ಹೌಸ್ ' ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. click here for more...
Wednesday, October 22, 2014
SELECTED FOR THE STATE CRICKET TEAM
ಕೇರಳ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆ
.
ನಮ್ಮ ಶಾಲೆಯ ಹತ್ತನೇ ತರಗತಿಯ ಮುಹಾಜ್ ಮಹಮ್ಮದ್ ಶೈಕ್ ಕೇರಳ ರಾಜ್ಯ ಅಂಡರ್ 17 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಕಳೆದ ಬಾರಿಯೂ ಆಯ್ಕೆಯಾಗಿ ಅತ್ಯುತ್ತಮ ಆಟಗಾರನಾಗಿ ಮಿಂಚಿರುವ ಮುಹಾಜ್ ಓರ್ವ ಪ್ರತಿಭಾವಂತ ವಿದ್ಯಾರ್ಥಿಯಾಗಿರುವನು. ಈಗಾಗಲೇ ಹಲವಾರು ಕ್ರೀಡಾಮೇಳಗಳಲ್ಲಿ ಭಾಗವಹಿಸಿ. ಜನಮೆಚ್ಚುಗೆಯನ್ನು ಪಡೆದಿರುವನು. ಚಂಢೀಘಢದಲ್ಲಿ ನಡೆಯಲಿರುವ ಅಂತರಾಜ್ಯ ಕ್ರಿಕೆಟ್ ಸ್ಪರ್ಧೆಯಲ್ಲಿ ಮುಹಾಜ್ ಅತ್ಯುತ್ತಮ ಸಾಧನೆಯನ್ನು ಮಾಡಲೆಂದು ಶಾಲಾ ಮುಖ್ಯೋಪಾಧ್ಯಾಯಿನಿ. ಶ್ರೀಮತಿ ಲತಾ ಕೆಯವರು ಶುಭ ಹಾರೈಸಿದರು.
CHAMPIONS OF KABADDI AND VOLLEYBALL TOURNAMENT
'ಪೈಕಾ ' ಹಾಗೂ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಬಡ್ಡಿ-ವಾಲಿಬಾಲ್ ವಿಜೇತ ತಂಡಗಳು
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಬಡ್ಡಿ-ವಾಲಿಬಾಲ್ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯರ ಕಬಡ್ಡಿ ಹಾಗೂ ವಾಲಿಬಾಲ್ ತಂಡಗಳು ಪ್ರಥಮ ಸ್ಥಾನವನ್ನು ಗಳಿಸಿದುವು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ . ಕೆ ವಿಜೇತ ತಂಡಗಳನ್ನು ಅಭಿನಂದಿಸಿದರು.
FAREWELL TO SHRI SREEDHARAN T . V
ಶ್ರೀ ಶ್ರೀಧರನ್ ಟಿ . ವಿ - ಬೀಳ್ಗೊಡುಗೆ ಸಮಾರಂಭ
ನಮ್ಮ ಶಾಲೆಯಿಂದ ವರ್ಗಾವಣೆಗೊಂಡ ಸಮಾಜ ವಿಜ್ನಾನ ವಿಭಾಗದ ಹಿರಿಯ ಅಧ್ಯಾಪಕರಾದ ಶ್ರೀ ಶ್ರೀಧರನ್ ಟಿ.ವಿ. ಅವರಿಗೆ ಶಿಕ್ಷಕ ವೃಂದದಿಂದ ಆದರದ ವಿದಾಯವನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಕೆ. ಹಾಗೂ ಸಹ ಶಿಕ್ಷಕರು ಶುಭ ಹಾರೈಸಿದರು. ಅವರ ಮುಂದಿನ ಜೀವನವು ಸುಖಕರವಾಗಲೆಂದು ಶುಭ ಹಾರೈಸುತ್ತಾ.............. blog team...
' ಸಾಕ್ಷರ ' ಸಮಾರೋಪ ಕ್ಯಾಂಪ್
SAKSHARA CAMP
ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ಸಾಕ್ಷರ ತರಗತಿಯ ಸಮಾರೋಪ ಸಮಾರಂಭವು ದಿನಾಂಕ 18.10.2014ರಂದು ಜರುಗಿತು. ಸಮಾರಂಭದ ಉಧ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಆಯಿಶಾತ್ ತಾಹಿರ ನಿರ್ವಹಿಸಿದರು. ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ಆಲಿ ಮಾಸ್ಟರ್ ಕಲಿಯುವಿಕೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಉದ್ಯಾವರ ಶಾಲೆಯ ಅಧ್ಯಾಪಕರಾದ ಶ್ರೀ ಜಯಪ್ರಕಾಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಹಿರಿಯ ಅಧ್ಯಾಪಿಕೆಯಾದ ಶ್ರೀಮತಿ ಶೀಲಾ ಕೆ.ಎಸ್ ಧನ್ಯವಾದವನ್ನಿತ್ತರು .
Tuesday, October 7, 2014
'STEPS' MOTIVATION TRAINING CAMP
'ಸ್ಟೆಪ್ಸ್ ' ಮೋಟಿವೇಶನ್ ತರಗತಿ
ಮಂಜೇಶ್ವರ ಉಪಜಿಲ್ಲಾ ಮಟ್ಟದ ' ಸ್ಟೆಪ್ಸ್ ' ಮೋಟಿವೇಶನ್ ತರಗತಿಗಳು ದಿನಾಂಕ 07.10.2014ರಂದು ವಿವಿಧ ಕೇಂದ್ರಗಳಲ್ಲಿ ಜರಗಿತು. ಕನ್ನಡ ಮಾಧ್ಯಮದ ಶಿಕ್ಷಕ / ಶಿಕ್ಷಕಿಯರಿಗಾಗಿ S . A . T ಮಂಜೇಶ್ವರದಲ್ಲಿ ನಡೆದ ತರಬೇತಿಯಲ್ಲಿ ನಮ್ಮ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀಯುತ ಲಕ್ಷ್ಮೀಕಾಂತ್ .ಕೆ ಹಾಗೂ ಶ್ರೀ ಪ್ರವೀಣ್ ಕುಮಾರ್ ರವರು ಪಾಲ್ಗೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀ ಸಂಜೀವ ಮರಿಕೆ ಜಿಎಚ್‌ಎಸ್‌ಎಸ್ ಪೈವಳಿಕೆ, ಶ್ರೀ ನಾರಾಯಣ,ಎನ್ ಎಚ್ ಎಸ್ ಪೆರಡಾಲ ಹಾಗೂ ಶ್ರೀಮತಿ ಜಲಜಾಕ್ಷಿ , DIET ಮಾಯಿಪಾಡಿಯವರು ತರಗತಿಯನ್ನು ನಡೆಸಿ ಕೊಟ್ಟರು.
ಮಲಯಾಳ ಮಾಧ್ಯಮದ ಶಿಕ್ಷಕ / ಶಿಕ್ಷಕಿಯರಿಗಾಗಿ ಜಿ ಎಸ್ ಬಿ ಎಸ್ ಕುಂಬಳೆಯಲ್ಲಿ ನಡೆದ ತರಬೇತಿಯಲ್ಲಿ ನಮ್ಮ ಶಾಲಾ ಅಧ್ಯಾಪಕರಾದ ಶ್ರೀಯುತ ಶ್ರೀಧರನ್ ಟ.ವಿ ಹಾಗೂ ಶ್ರೀಮತಿ ಶೌಜತ್ ರವರು ಪಾಲ್ಗೊಂಡರು.
Monday, October 6, 2014
Thursday, October 2, 2014
"Dasara Naada Habba"
ಮಂಗಲ್ಪಾಡಿ ಶಾಲೆಯಲ್ಲಿ ದಸರಾ ನಾಡ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ದಿನಾಂಕ 01.10.2014ರಂದು ಆಚರಿಸಲಾಯಿತು.ಶ್ರೀಮತಿ ಜ್ಯೋತಿ.ಎಚ್. ಸಮಾರಂಭವನ್ನು ಉಧ್ಗಾಟಿಸಿದರು. ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಮಕ್ಕಳೆಲ್ಲರೂ ಅತ್ಯುತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶಾಲಾ ವಿದ್ಯಾರ್ಥಿನಿಯರು ರಚಿಸಿದ ಚುಕ್ಕಿ ರಂಗೋಲಿಗಳಂತೂ ಅತ್ಯಂತ ಮನಮೋಹಕವಾಗಿತ್ತು.
Subscribe to:
Posts (Atom)