Powered by Blogger.

Monday, October 27, 2014

 MANJESHWAR SUB DISTRICT VIDYARANGA 2014-15
ಮಂಜೇಶ್ವರ ಉಪಜಿಲ್ಲೆ ವಿದ್ಯಾರಂಗ ಸಾಹಿತ್ಯೋತ್ಸವ  2014 - 15 
വിദ്യാരംഗ സാഹിത്യോത്സവം

ಮಂಜೇಶ್ವರ ಉಪಜಿಲ್ಲೆಯ 2014-15ನೇ ಸಾಲಿನ ವಿದ್ಯಾರಂಗ ಕಲಾ  ಸಾಹಿತ್ಯೋತ್ಸವವು ನಮ್ಮ ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯಲ್ಲಿ ದಿನಾಂಕ 27.10.2014ರಂದು ಜರಗಿತು. ಸುಮಾರು 80ರಷ್ಟು ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ ಈ ಕಾರ್ಯಕ್ರಮವನ್ನು ಮಂಜೇಶ್ವರ ಮಂಡಲದ ಶಾಸಕರಾದ ಶ್ರೀ ಅಬ್ದುಲ್ ರಜಾಕ್ ರವರು ಉಧ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕೆ ರವರು ಸ್ವಾಗತಿಸಿದರು. ಸಭೆಯಲ್ಲಿ ಭಾಗವಹಿಸಿದ ಮಂಜೇಶ್ವರ ಉಪಜಿಲ್ಲಾ ಶಿಕ್ಷನಾಧಿಕಾರಿಗಳಾದ ಶ್ರೀ ಎನ್ ನಂದಿಕೇಶನ್  ತಮ್ಮ ಪ್ರಸ್ತಾವಿಕ  ಭಾಷಣದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಕಲೆ ಹಾಗೂ ಸಾಹಿತ್ಯದ ಮಹತ್ವದ ಕುರಿತು ಮಾರ್ಗದರ್ಶನವನ್ನು ನೀಡಿದರು
ಪ್ರಧಾನ ಉಪನ್ಯಾಸಕರಾಗಿ ಆಗಮಿಸಿದ ಶ್ರೀ. ಕೆ .  ಕಮಲಾಕ್ಷ ,ನಿರ್ದೇಶಕರು ಭಾರತೀಯ ಭಾಷಾ ಅಧ್ಯಯನಾಂಗ, ಕಾಸರಗೋಡು ತಮ್ಮ ವಾಕ್ಚಾತುರ್ಯದಿಂದ ವಿದ್ಯಾರ್ಥಿಗಳ ಮನಗೆದ್ದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಜಿಸಾ ಜೋಸ್ ಶುಭ ಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಸುನಿಲ್ ಕುಮಾರ್ ಟಿ ಧಾನ್ಯಾವಾದವಿತ್ತರು.
ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 
ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಿರಿಯ ಅಧ್ಯಾಪಕರೂ ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ  ಕಾರ್ಯದರ್ಶಿಯೂ ಆದ ಶ್ರೀ ಗುರುಮೂರ್ತಿ ಎಂ ನಡೆಸಿಕೊಟ್ಟರು. ವಿಜೇತರಾದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರಗಳನ್ನು ಹಂಚಲಾಯಿತು.CLICK HERE FOR RESULTS... 

വിദ്യാരംഗ സാഹിത്യോത്സവം ഉദ്ഘാടനം ചെയ്തു മംഗല്‍പാടി ഗവ. ഹയര്‍ സെക്കണ്ടരി സ്കൂളില്‍ മംഞ്ചേശ്വരം ഉപജില്ലാ വിദ്യാരംഗ കലാ സാഹിത്യ വേദിയുടെ ഈ വര്‍ഷത്തെ സാഹിത്യോത്സവം മംഞ്ചേശ്വരം എംഎല്‍എ അബ്ദുള്‍ രസാക് ഉദ്ഘാടനം ചെയ്ദു. പിടിഎ പ്രസിഡണ്ട് ഉമ്മര്‍ അപ്പോളോ അധ്യക്ഷം വഹിച്ചു. കാസറഗോഡ് പ്രവര്‍ത്തിക്കുന്ന ഇന്ത്യന്‍ ഭാഷാ ഗവേഷണ കേന്ദ്രം തലവന്‍ ഡോ. കമലാക്ഷ മുഖ്യ പ്രഭാഷണം നടത്തി. ഉപജില്ലാ വിദ്യഭ്യാസ ഓഫീസര്‍ നന്തികേശന്‍, പ്രിന്‍സിപ്പാള്‍ ജിസാ ജോസ് ആശംസകള്‍ അര്‍പ്പിച്ചു. ഹെഡ് മിസ്‍ട്രസ് ലത കെ സ്വാഗതവും റിസപ്ശന്‍ കമ്മിറ്റി കണ്‍വീണര്‍ സുനില്‍കുമാര് നന്ദി പ്രകാശനം നടത്തി. ഒമ്പതു വേദികളിലായി കന്നട, മലയാളം വിഭാഗത്തില്‍ കഥാരചന, കവിതാ രചന, നാടന്‍ പാട്ട്, കാവ്യമഞ്ചരി, ഉപന്യാസ രചന, ചിത്ര രചന എന്നീ മത്സരങ്ങള്‍ നടന്നു. മംഞ്ചേശ്വരം ഉപജില്ലയിലെ സാഹിത്യോത്സവത്തിന്റെ ചരിത്രത്തിലാദ്യമായി എമ്പത്തിനാല് സ്രൂളുകളില്‍നിന്നായി എണ്ണൂരോളം കുട്ടികള്‍ സാഹിത്യോത്സവത്തില്‍ പങ്കെടുത്തു.

Saturday, October 25, 2014

ಎಲ್ಲಾ ಕಲಾಭಿಮಾನಿಗಳಿಗೂ ಜಿ ಎಚ್ ಎಸ್ ಎಸ್ ಮಂಗಲ್ಪಾಡಿಗೆ ಆದರದ ಸ್ವಾಗತ...

 

Friday, October 24, 2014


SCHOOL KALOTHSAVAM 2014
ಕಲೋತ್ಸವ 2014 


ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯ ಕಲೋತ್ಸವವು ದಿನಾಂಕ 23 ಮತ್ತು 24.10.14 ರಂದು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಸಮಾರಂಭದ ಉಧ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಯಾದ ಶ್ರೀಮತಿ ಆಯಿಶಾತ್ ತಾಹಿರ ನೆರವೇರಿಸಿದರು.. ಕಲೋತ್ಸವ ಕನ್ವೀನರ್ ಶ್ರೀ ಸುನಿಲ್ ಕುಮಾರ್ ಟಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮ್ಮರ್ ಆಪೋಲೋ , ಹಿರಿಯ ಶಿಕ್ಷಕಿ ಶ್ರೀಮತಿ ಜ್ಯೋತಿ ಎಚ್ ಹಾಗೂ ಇತರ ಗಣ್ಯರು ಕಾರ್ಯಕ್ರಮಕ್ಕೆ ಶುಭ ಕೋರಿದರು.. ಹಿರಿಯ ಅಧ್ಯಾಪಿಕೆ ಶೀಲಾ ಕೆ ಎಸ್ ಧನ್ಯವಾದವನ್ನಿತ್ತರು. 
ವಿಜೇತ ತಂಡಗಳಿಗೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ ಕ, ಬಹುಮಾನಗಳನ್ನು ವಿತರಿಸಿದರು. ಹೈಸ್ಕೂಲ್  ಜನರಲ್ ವಿಭಾಗದಲ್ಲಿ ರಿಜೇಶ್ 10 ಎ ನೇತೃತ್ವದ 'ಬ್ಲ್ಯೂ ಹೌಸ್ ' ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. click here for more...



Wednesday, October 22, 2014

SELECTED FOR THE STATE CRICKET TEAM 
ಕೇರಳ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆ 
.

ನಮ್ಮ ಶಾಲೆಯ ಹತ್ತನೇ ತರಗತಿಯ ಮುಹಾಜ್ ಮಹಮ್ಮದ್ ಶೈಕ್ ಕೇರಳ ರಾಜ್ಯ ಅಂಡರ್ 17 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಕಳೆದ ಬಾರಿಯೂ ಆಯ್ಕೆಯಾಗಿ ಅತ್ಯುತ್ತಮ ಆಟಗಾರನಾಗಿ ಮಿಂಚಿರುವ ಮುಹಾಜ್ ಓರ್ವ ಪ್ರತಿಭಾವಂತ ವಿದ್ಯಾರ್ಥಿಯಾಗಿರುವನು. ಈಗಾಗಲೇ ಹಲವಾರು ಕ್ರೀಡಾಮೇಳಗಳಲ್ಲಿ ಭಾಗವಹಿಸಿ.       ಜನಮೆಚ್ಚುಗೆಯನ್ನು ಪಡೆದಿರುವನು. ಚಂಢೀಘಢದಲ್ಲಿ ನಡೆಯಲಿರುವ ಅಂತರಾಜ್ಯ ಕ್ರಿಕೆಟ್ ಸ್ಪರ್ಧೆಯಲ್ಲಿ ಮುಹಾಜ್ ಅತ್ಯುತ್ತಮ ಸಾಧನೆಯನ್ನು ಮಾಡಲೆಂದು ಶಾಲಾ ಮುಖ್ಯೋಪಾಧ್ಯಾಯಿನಿ. ಶ್ರೀಮತಿ ಲತಾ ಕೆಯವರು ಶುಭ ಹಾರೈಸಿದರು.
CHAMPIONS OF KABADDI AND VOLLEYBALL TOURNAMENT
'ಪೈಕಾ ' ಹಾಗೂ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಬಡ್ಡಿ-ವಾಲಿಬಾಲ್ ವಿಜೇತ ತಂಡಗಳು 

 

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಬಡ್ಡಿ-ವಾಲಿಬಾಲ್ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯರ ಕಬಡ್ಡಿ ಹಾಗೂ ವಾಲಿಬಾಲ್ ತಂಡಗಳು ಪ್ರಥಮ ಸ್ಥಾನವನ್ನು ಗಳಿಸಿದುವು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ . ಕೆ ವಿಜೇತ ತಂಡಗಳನ್ನು ಅಭಿನಂದಿಸಿದರು. 

FAREWELL TO SHRI SREEDHARAN T . V 
 ಶ್ರೀ ಶ್ರೀಧರನ್ ಟಿ . ವಿ  - ಬೀಳ್ಗೊಡುಗೆ ಸಮಾರಂಭ 


ನಮ್ಮ ಶಾಲೆಯಿಂದ ವರ್ಗಾವಣೆಗೊಂಡ ಸಮಾಜ ವಿಜ್ನಾನ ವಿಭಾಗದ ಹಿರಿಯ ಅಧ್ಯಾಪಕರಾದ ಶ್ರೀ ಶ್ರೀಧರನ್ ಟಿ.ವಿ. ಅವರಿಗೆ ಶಿಕ್ಷಕ ವೃಂದದಿಂದ ಆದರದ ವಿದಾಯವನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಕೆ. ಹಾಗೂ ಸಹ ಶಿಕ್ಷಕರು ಶುಭ ಹಾರೈಸಿದರು. ಅವರ ಮುಂದಿನ ಜೀವನವು ಸುಖಕರವಾಗಲೆಂದು ಶುಭ ಹಾರೈಸುತ್ತಾ.............. blog team...
' ಸಾಕ್ಷರ ' ಸಮಾರೋಪ ಕ್ಯಾಂಪ್ 
SAKSHARA CAMP 

 

ಜಿ ಎಚ್ ಎಸ್ ಎಸ್ ಮಂಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ಸಾಕ್ಷರ ತರಗತಿಯ ಸಮಾರೋಪ ಸಮಾರಂಭವು ದಿನಾಂಕ  18.10.2014ರಂದು ಜರುಗಿತು. ಸಮಾರಂಭದ ಉಧ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಆಯಿಶಾತ್ ತಾಹಿರ ನಿರ್ವಹಿಸಿದರು. ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ಆಲಿ ಮಾಸ್ಟರ್ ಕಲಿಯುವಿಕೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಉದ್ಯಾವರ ಶಾಲೆಯ ಅಧ್ಯಾಪಕರಾದ ಶ್ರೀ ಜಯಪ್ರಕಾಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಹಿರಿಯ ಅಧ್ಯಾಪಿಕೆಯಾದ ಶ್ರೀಮತಿ ಶೀಲಾ ಕೆ.ಎಸ್ ಧನ್ಯವಾದವನ್ನಿತ್ತರು . 

Friday, October 17, 2014

Manjeshwar Sub District Work Experience Fair - 2014

....

ಸೈಂಟ್ ಜೋಸೆಫ್ ಶಾಲೆ ಕಳಿಯೂರಿನಲ್ಲಿ ನಡೆದ ವೃತ್ತಿಪರಿಚಯ ಮೇಳದ wood carving ವಿಭಾಗದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಯಾದ Harshakiran, 8 B ಪ್ರಥಮ ಸ್ಥಾನವನ್ನು ಪಡೆದಿರುವನು. congratulations ....... 

THANK YOU...visit again....

 photo sculjpg_zpsf45fe30f.jpg  photo grop2_zpse47e73cc.jpg  photo group_zpsc7f6e26f.jpg  photo P1000980_zps764c8b73.jpg  photo 16_zps1e430375.jpg  photo 15_zpsc2b37b7d.jpg  photo 14_zpsdc40f499.jpg  photo 13_zpsdb503dae.jpg  photo 10_zps1484e233.jpg  photo 9_zps3fc85212.jpg  photo 8_zps42505a73.jpg  photo 7_zps4d2e909c.jpg  photo 6_zps880d8420.jpg  photo 5_zps8795a4cc.jpg  photo 3_zps5ea5a583.jpg  photo 2_zps852c66de.jpg  photo 1_zpsde135223.jpg